ಕ್ರೈಸಾಯ್ಡಿನ್ 
	ಕ್ಷಾರೀಯ ಅಜೊóೀವರ್ಣದ್ರವ್ಯ. ಡೈಅಜೊóೀಟೈಜ್ó ಮಾಡಿದ ಅನಿಲೀನನ್ನು ಮೆಟಫಿನೈಲೀನ್ ಡೈ ಅಮೀನಿನೊಡನೆ ಸಂಲಗ್ನಗೊಳಿಸಿ (ಕಪಲ್) ಇದನ್ನು ತಯಾರಿಸಲಾಗುವುದು. ಕ್ರೈಸಾಯ್ಡಿನ್ ಕೆಂಪು ಮಿಶ್ರಿತ ಕಂದು ಬಣ್ಣದ ಪುಡಿ ಅಥವಾ ಹಸಿರು ಸೂಸುವ ಕಪ್ಪು ಹರಳುಗಳು. ಕರಗುವ ಬಿಂದು 117( ಸೆಂ. ಇದು ನೀರಿನಲ್ಲಿ ಮತ್ತು ಮದ್ಯಸಾರದಲ್ಲಿ ವಿಲೀನವಾಗಿ ಕಿತ್ತಳೆ ಬಣ್ಣದ ದ್ರಾವಣ ಕೊಡುತ್ತದೆ. ಈಥರಿನಲ್ಲಿ ವಿಲೀನವಾಗುವುದಿಲ್ಲ. ಹತ್ತಿ ಮತ್ತು ರೇಷ್ಮೆಗಳಿಗೆ ಕಿತ್ತಳೆ ಬಣ್ಣವಾಗಿ ಟ್ಯಾನಿನ್ ಬಣ್ಣಗಚ್ಚಿನ (ಮಾರ್ಡೆಂಟ್) ಮೇಲೆ ಉಪಯೋಗಿಸಲಾಗುವುದು.						(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ